ಮಧುಮೇಹ ಅಂದರೆ ನೀವು ನಿಮ್ಮ ರಕ್ತದಲ್ಲಿ ಅತೀ ಹೆಚ್ಚು ಸಕ್ಕರೆಯನ್ನು ಹೊಂದಿದ್ದೀರಿ ಎಂದು ಅರ್ಥ. ಇನ್ಸುಲಿನ್ ಎಂದು ಕರೆಯಲ್ಪಡುವ ಒಂದು ರಾಸಾಯನಿಕ, ಅಥವಾ ಹಾರ್ಮೋನಿನ ಉತ್ಪಾದನೆಯನ್ನು ನಿಮ್ಮ ದೇಹವು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸದೇ ಇದ್ದಾಗ ರಕ್ತದಲ್ಲಿ ಅಧಿಕ ಸಕ್ಕರೆಯ ಸಮಸ್ಯೆಯು ಉಂಟಾಗುತ್ತದೆ.

ನಿಮ್ಮ ದೇಹವು ನೀವು ಸೇವಿಸುವ ಹೆಚ್ಚಿನ ಆಹಾರವನ್ನು ಗ್ಲೂಕೋಸ್ ಎಂದು ಕರೆಯಲ್ಪಡುವ ಒಂದು ವಿಧದ ಸಕ್ಕರೆಯನ್ನಾಗಿ ಮಾರ್ಪಡಿಸುತ್ತದೆ.

ಈ ಸಕ್ಕರೆಯು ನಿಮ್ಮ ರಕ್ತದಲ್ಲಿ ಚಲಿಸಿ ನಿಮ್ಮ ದೇಹದಲ್ಲಿರುವ ಎಲ್ಲಾ ಜೀವಕೋಶಗಳಿಗೆ ತಲುಪುತ್ತದೆ. ನಿಮಗೆ ಶಕ್ತಿಯನ್ನು ಕೊಡಲು ನಿಮ್ಮ ದೇಹದ ಜೀವಕೋಶಗಳಿಗೆ ಸಕ್ಕರೆಯ ಅವಶ್ಯಕತೆಯಿದೆ.

ಸಕ್ಕರೆ ನಿಮ್ಮ ರಕ್ತದಿಂದ ನಿಮ್ಮ ಜೀವಕೋಶಗಳಿಗೆ ತಲುಪಲು ಇನ್ಸುಲಿನ್ ನೆರವಾಗುತ್ತದೆ. ಇನ್ಸುಲಿನ್ ಇಲ್ಲದೇ ಇದ್ದರೆ, ನಿಮ್ಮ ಜೀವಕೋಶಗಳಿಗೆ ನಿಮ್ಮನ್ನು ಸದಾ ಚೈತನ್ಯದಿಂದಿಡಲು ಬೇಕಾಗುವ ಸಕ್ಕರೆಯನ್ನು ಪಡೆಯಲು ಆಗುವುದಿಲ್ಲ.

ಸಕ್ಕರೆಯನ್ನು ನಿಮ್ಮ ರಕ್ತದಿಂದ ನಿಮ್ಮ ದೇಹದ ಜೀವಕೋಶಗಳಿಗೆ ಸಾಗಿಸುವ ಮೂಲಕ, ಇನ್ಸುಲಿನ್ ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸಹಜ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. (ಅತೀ ಹೆಚ್ಚೂ ಅಲ್ಲ; ಅತೀ ಕಡಿಮೆಯೂ ಅಲ್ಲ)

ಸಕ್ಕರೆಯನ್ನು ನಿಮ್ಮ ರಕ್ತದಿಂದ ನಿಮ್ಮ ದೇಹದ ಜೀವಕೋಶಗಳಿಗೆ ಸಾಗಿಸುವ ಮೂಲಕ, ಇನ್ಸುಲಿನ್ ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸಹಜ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. (ಅತೀ ಹೆಚ್ಚೂ ಅಲ್ಲ; ಅತೀ ಕಡಿಮೆಯೂ ಅಲ್ಲ)

ರಕ್ತದಲ್ಲಿ ಅಧಿಕ ಸಕ್ಕರೆಯ ಅಂಶವು ಗಂಭೀರವಾದ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡಬಹುದು.

ಮಧುಮೇಹಕ್ಕೆ ಚಿಕಿತ್ಸೆ ಮಾಡಬಹುದು, ಮತ್ತು ಮಾಡಲೇಬೇಕು.

 

ನಿಮ್ಮ ದೇಹವು ಇನ್ಸುಲಿನ್ ಅನ್ನು ಉತ್ಪಾದಿಸದೇ ಇದ್ದಾಗ

ನಿಮ್ಮ ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುತ್ತಿಲ್ಲ, ಅಥವಾ ದೇಹವು ಉತ್ಪಾದಿಸುವ ಇನ್ಸುಲಿನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದಾಗ.

ಸಕ್ಕರೆಯನ್ನು ನಿಮ್ಮ ರಕ್ತದಿಂದ ನಿಮ್ಮ ಜೀವಕೋಶಗಳಿಗೆ ಚಲಿಸುವಂತೆ ಮಾಡಲು ನಿಮ್ಮಲ್ಲಿ ಸಾಕಷ್ಟು ಇನ್ಸುಲಿನ್ ಇಲ್ಲದೇ ಹೋದಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಅಧಿಕ ಮಟ್ಟದಲ್ಲಿರುತ್ತದೆ.

 

2ನೇ ವಿಧದ ಮಧುಮೇಹದಲ್ಲಿ, ದೇಹವು ಇನ್ಸುಲಿನ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಉತ್ಪಾದಿಸಬಹುದು, ಆದರೆ ಅದು ಸಾಕಾಗುವುದಿಲ್ಲ.

ಅಥವಾ ದೇಹವು ಉತ್ಪಾದಿಸುವ ಇನ್ಸುಲಿನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.

2ನೇ ವಿಧದ ಮಧುಮೇಹವು ಹೆಚ್ಚಾಗಿ ವಯಸ್ಕರಲ್ಲಿ ಪ್ರಾರಂಭವಾಗುತ್ತದೆ, ಆದರೆ ಇದು ಮಕ್ಕಳಲ್ಲೂ ಕೂಡಾ ಆರಂಭವಾಗಬಹುದು.

ಅಧಿಕ ತೂಕವುಳ್ಳ ವ್ಯಕ್ತಿಗಳಲ್ಲಿ ಅಥವಾ ಕುಟುಂಬದಲ್ಲಿ ಇದನ್ನು ಯಾರಾದರೊಬ್ಬರು ಹೊಂದಿದ್ದರೆ ಇದು ಬಹಳ ಸಾಮಾನ್ಯವಾಗಿ ಕಂಡುಬರುತ್ತದೆ.