Type 1 Kannada – ಮಧುಮೇಹ ಎಂದರೇನು?

ಮಧುಮೇಹ ಅಂದರೆ ನೀವು ನಿಮ್ಮ ರಕ್ತದಲ್ಲಿ ಅತೀ ಹೆಚ್ಚು ಸಕ್ಕರೆಯನ್ನು ಹೊಂದಿದ್ದೀರಿ ಎಂದು ಅರ್ಥ. ಇನ್ಸುಲಿನ್ ಎಂದು ಕರೆಯಲ್ಪಡುವ ಒಂದು ರಾಸಾಯನಿಕ, ಅಥವಾ ಹಾರ್ಮೋನಿನ ಉತ್ಪಾದನೆಯನ್ನು ನಿಮ್ಮ ದೇಹವು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸದೇ ಇದ್ದಾಗ ರಕ್ತದಲ್ಲಿ ಅಧಿಕ ಸಕ್ಕರೆಯ ಸಮಸ್ಯೆಯು ಉಂಟಾಗುತ್ತದೆ. ನಿಮ್ಮ ದೇಹವು ನೀವು ಸೇವಿಸುವ ಹೆಚ್ಚಿನ ಆಹಾರವನ್ನು ಗ್ಲೂಕೋಸ್ ಎಂದು ಕರೆಯಲ್ಪಡುವ ಒಂದು ವಿಧದ ಸಕ್ಕರೆಯನ್ನಾಗಿ ಮಾರ್ಪಡಿಸುತ್ತದೆ. ಈ ಸಕ್ಕರೆಯು ನಿಮ್ಮ ರಕ್ತದಲ್ಲಿ ಚಲಿಸಿ ನಿಮ್ಮ ದೇಹದಲ್ಲಿರುವ ಎಲ್ಲಾ ಜೀವಕೋಶಗಳಿಗೆ ತಲುಪುತ್ತದೆ. ಸಕ್ಕರೆ ನಿಮ್ಮ ರಕ್ತದಿಂದ ನಿಮ್ಮ ಜೀವಕೋಶಗಳಿಗೆ ತಲುಪಲು ಇನ್ಸುಲಿನ್ ನೆರವಾಗುತ್ತದೆ. ಇನ್ಸುಲಿನ್ ಇಲ್ಲದೇ ಇದ್ದರೆ, ನಿಮ್ಮ ಜೀವಕೋಶಗಳಿಗೆ ನಿಮ್ಮನ್ನು ಸದಾ ಚೈತನ್ಯದಿಂದಿಡಲು ಬೇಕಾಗುವ ಸಕ್ಕರೆಯನ್ನು ಪಡೆಯಲು ಆಗುವುದಿಲ್ಲ. ಸಕ್ಕರೆಯನ್ನು ನಿಮ್ಮ ರಕ್ತದಿಂದ ನಿಮ್ಮ ದೇಹದ ಜೀವಕೋಶಗಳಿಗೆ ಸಾಗಿಸುವ ಮೂಲಕ, ಇನ್ಸುಲಿನ್ ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸಹಜ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. (ಅತೀ ಹೆಚ್ಚೂ ಅಲ್ಲ; ಅತೀ ಕಡಿಮೆಯೂ ಅಲ್ಲ) ರಕ್ತದಲ್ಲಿರುವ ಅಧಿಕ ಸಕ್ಕರೆಯ ಪ್ರಮಾಣವನ್ನು ತಗ್ಗಿಸಲು ನಿಮ್ಮಲ್ಲಿ ಸಾಕಷ್ಟು ಇನ್ಸುಲಿನ್ ಇಲ್ಲ ಎಂದಾದರೆ ನೀವು ಮಧುಮೇಹಿ ಎಂದರ್ಥ. ರಕ್ತದಲ್ಲಿ ಅಧಿಕ ಸಕ್ಕರೆಯ ಅಂಶವು ಗಂಭೀರವಾದ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡಬಹುದು. ಮಧುಮೇಹಕ್ಕೆ ಚಿಕಿತ್ಸೆ ಮಾಡಬಹುದು, ಮತ್ತು ಮಾಡಲೇಬೇಕು.

Type 1 Kannada – ಮಧುಮೇಹ ನಿಮಗೆ ಯಾವಾಗ ಬರುತ್ತದೆ?

ನಿಮ್ಮ ದೇಹವು ಇನ್ಸುಲಿನ್ ಅನ್ನು ಉತ್ಪಾದಿಸದೇ ಇದ್ದಾಗ ನಿಮ್ಮ ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುತ್ತಿಲ್ಲ, ಅಥವಾ ದೇಹವು ಉತ್ಪಾದಿಸುವ ಇನ್ಸುಲಿನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದಾಗ. ಸಕ್ಕರೆಯನ್ನು ನಿಮ್ಮ ರಕ್ತದಿಂದ ನಿಮ್ಮ ಜೀವಕೋಶಗಳಿಗೆ ಚಲಿಸುವಂತೆ ಮಾಡಲು ನಿಮ್ಮಲ್ಲಿ ಸಾಕಷ್ಟು ಇನ್ಸುಲಿನ್ ಇಲ್ಲದೇ ಹೋದಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಅಧಿಕ ಮಟ್ಟದಲ್ಲಿರುತ್ತದೆ.

Type 1 Kannada – 1ನೇ ವಿಧದ ಮಧುಮೇಹ

1ನೇ ವಿಧದ ಮಧುಮೇಹದಲ್ಲಿ, ದೇಹಕ್ಕೆ ಇಸುಲಿನ್ ಅನ್ನು ಉತ್ಪಾದಿಸಲು ಆಗುತ್ತಿಲ್ಲ. 1ನೇ ವಿಧದ ಮಧುಮೇಹವು ವಯಸ್ಸಾದವರಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ಮತ್ತು ತಾರುಣ್ಯದ ಹೊಸ್ತಿಲಲ್ಲಿ ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ. 1ನೇ ವಿಧದ ಮಧುಮೇಹವನ್ನು ಹೊಂದಿರುವ ವ್ಯಕ್ತಿಗಳು ತಮ್ಮ ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಡಲು ಇನ್ಸುಲಿನ್ ಅನ್ನು ಚುಚ್ಚುಮದ್ದಿನ ಮೂಲಕ ಹಾಕಿಸಿಕೊಳ್ಳಲೇಬೇಕು.

Type 1 Kannada – 1ನೇ ವಿಧದ ಮಧುಮೇಹದ ಚಿಹ್ನೆಗಳು

  • ಅತಿಯಾದ ಬಾಯಾರಿಕೆ
  • ಆಗಾಗ್ಗೆ ಮೂತ್ರವಿಸರ್ಜನೆ
  • ಒಂದು ಹಣ್ಣಿನಂತಹ ವಾಸನೆ
  • ಬಳಲಿಕೆ ನಿತ್ರಾಣ
  • ಮೂತ್ರದಲ್ಲಿ ಸಕ್ಕರೆ
  • ಅತಿಯಾದ ತೂಕದ ನಷ್ಟ

Type 1 Kannada – ಮಧುಮೇಹದ ಸಮಸ್ಯೆಗಳು

ಚೈತನ್ಯಕ್ಕಾಗಿ ಜೀವಕೋಶಗಳಲ್ಲಿ ಉಪಯೋಗಿಸಲ್ಪಡುವ ಗ್ಲೂಕೋಸ್ ಅನ್ನು(ನೀವು ಸೇವಿಸುವ ಆಹಾರದಿಂದ ಉತ್ಪಾದಿಸಲ್ಪಡುತ್ತದೆ) ರಕ್ತದಿಂದ ದೇಹದ ಜೀವಕೋಶಗಳಿಗೆ ರವಾನಿಸಲು ಇನ್ಸುಲಿನ್ ಒಂದು ಅವಶ್ಯಕವಾದ ಹಾರ್ಮೋನ್ ಆಗಿದೆ. ಇನ್ಸುಲಿನ್ ಸಾಕಷ್ಟು ಪ್ರಮಾಣದಲ್ಲಿ ಇಲ್ಲದೇ ಹೋದಾಗ, ಗ್ಲೂಕೋಸ್ ರಕ್ತದಲ್ಲಿ ಶೇಖರಗೊಂಡು, ಈ ಕೆಳಗಿನ ಸಮಸ್ಯೆಗಳನ್ನೂ ಒಳಗೊಂಡು ಜನರನ್ನು ಗಂಭೀರವಾದ ಆರೋಗ್ಯದ ಸಮಸ್ಯೆಗಳ ಅಪಾಯಕ್ಕೀಡುಮಾಡುತ್ತದೆ-

  • ಹೃದಯಾಘಾತ ಮತ್ತು ಲಕ್ವ
  • ಹೊಡೆಯುವುದು
  • ಮೂತ್ರಪಿಂಡದ ಸಮಸ್ಯೆಗಳು
  • ಪಾದಗಳಲ್ಲಿ ಮರಗಟ್ಟಿದ/ಸಂವೇದನಾ
  • ರಹಿತ ಅನುಭವ ಮತ್ತು ವಾಸಿಯಾಗದ ಹುಣ್ಣುಗಳು
  • ದೃಷ್ಟಿ ದೋಷಗಳು
ರಕ್ತದಲ್ಲಿರುವ ಗ್ಲೂಕೋಸಿನ ಪ್ರಮಾಣವನ್ನು ಸಾಧ್ಯವಾದಷ್ಟೂ ಸಹಜ ಮಟ್ಟದಲ್ಲಿರಿಸುವ ಮೂಲಕ ನೀವು ಮಧುಮೇಹದ ದೀರ್ಘಕಾಲೀನ ಸಮಸ್ಯೆಗಳನ್ನು ತಡೆಯಲು ಅಥವಾ ಮುಂದೂಡಲು ನೆರವಾಗಬಹುದು.