New to Insulin Kannada – ನನಗೆ ಯಾಕೆ ಇನ್ಸುಲಿನ್ ಬೇಕು?

ಅದು ರಕ್ತದಲ್ಲಿನ ಗ್ಲೂಕೋಸನ್ನು ನಿಯಂತ್ರಿಸಲು ಮೇದೋಜ್ಜೀರಕ ಗ್ರಂಥಿಗಳು ಉತ್ಪಾದಿಸುವ ಹಾರ್ಮೋನ್ ಆಗಿದೆ. ಇನ್ಸುಲಿನ್ ಇಲ್ಲದಿದ್ದರೆ ನಮ್ಮ ಶರೀರದ ಕೋಶಗಳು ಗ್ಲೂಕೋಸನ್ನು ಒಂದು ಶಕ್ತಿಯ ಮೂಲವಾಗಿ ಬಳಸಲು ಆಗುವುದಿಲ್ಲ. ನಿಮಗೆ ಮಧುಮೇಹವಿದ್ದಲ್ಲಿ, ನಿಮ್ಮ ದೇಹವು ಇನ್ಸುಲಿನ್‍ನ್ನು ತಯಾರಿಸುವುದಿಲ್ಲ ಅಥವಾ ನೀವು ತಯಾರಿಸುವ ಇನ್ಸುಲಿನ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹಾಗಾಗಿ ನಿಮಗೆ ಹೊರಗಿನ ಇನ್ಸುಲಿನ್‍ನ ಅಗತ್ಯವಿರುತ್ತದೆ. ಒಂದು ಇನ್ಸುಲಿನ್ ಪೆನ್, ಒಂದು ಸಿರಿಂಜ್, ಅಥವಾ ಇನ್ಸುಲಿನ್ ಪಂಪ್‍ನ ಮೂಲಕ ಚುಚ್ಚಿಕೊಂಡು ನಿಮಗೆ ಬೇಕಾದ ಇನ್ಸುಲಿನ್‍ನ್ನು ಪಡೆದುಕೊಳ್ಳಬಹುದು. ಇನ್ಸುಲಿನ್ ತೆಗೆದುಕೊಳ್ಳುವುದರಿಂದ: ನಿಮಗೆ ನಿಮ್ಮ ಸಕ್ಕರೆಯ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ನಿಮಗೆ ಶಕ್ತಿಯನ್ನು ಕೊಡುತ್ತದೆ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ

New to Insulin Kannada – ದೇಹದಲ್ಲಿ ಇನ್ಸುಲಿನ್‍ನ ಸ್ರವಿಸುವಿಕೆ

ಬಸಲ್ ಇನ್ಸುಲಿನ್ ಎಂದು ಕರೆಯಲ್ಪಡುವ ಇನ್ಸುಲಿನ್ ಉಪವಾಸದ ಸ್ಥಿತಿಯಲ್ಲಿ ಸ್ರವಿಸುತ್ತದೆ. ಆಹಾರದ ಸೇವನೆಯ ನಂತರ ರಕ್ತದ ಗ್ಲೂಕೋಸಿನ ಅಂಶದಲ್ಲಿನ ಹೆಚ್ಚಳಕ್ಕೆ ಅನುಗುಣವಾಗಿ ಇನ್ಸುಲಿನ್ ಸ್ರವಿಸುವಿಕೆಯೂ ಹೆಚ್ಚಾಗುತ್ತದೆ. ಮಧುಮೇಹದಲ್ಲಿ ಈ ಪ್ರಕ್ರಿಯೆಯು ಪರಿಣಾಮಕ್ಕೊಳಪಡುತ್ತದೆ ಇದಕ್ಕಾಗಿ ಹೊರಗಿನಿಂದ ಇನ್ಸುಲಿನ್‍ನ್ನು ಇಂಜೆಕ್ಟ್ ಮಾಡಬೇಕಾಗುತ್ತದೆ.