GDM Kannada – ಗರ್ಭಧಾರಣೆಯ ಮಧುಮೇಹ ಎಂದರೇನು?

  • ಗರ್ಭಿಣಿಯಾಗಿರುವಾಗ ಉಂಟಾಗುವ ಮಧುಮೇಹವನ್ನು ಗರ್ಭಧಾರಣೆಯ ಮಧುಮೇಹ ಎಂದು ಕರೆಯಲಾಗುತ್ತದೆ.
  • ಗರ್ಭಿಣಿಯಾಗಿರುವಾಗ ಹೆಚ್ಚುವರಿ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಇನ್ಸುಲಿನ್ (ರಕ್ತದ ಗ್ಲುಕೋಸ್ ಅನ್ನು ನಿಯಂತ್ರಿಸಲು ಅಗತ್ಯವಿರುವ ಹಾರ್ಮೋನ್) ಅನ್ನು ನಿಮ್ಮ ದೇಹವು ಉತ್ಪಾದಿಸದೇ ಇರುವಾಗ ಇದು ಸಂಭವಿಸುತ್ತದೆ. ಇದು ಅಧಿಕ ರಕ್ತ ಗ್ಲುಕೋಸ್ ಮಟ್ಟಗಳಿಗೆ ಕಾರಣವಾಗುತ್ತದೆ.
  • ಗರ್ಭಧಾರಣೆಯ ಮಧ್ಯದಲ್ಲಿ ಅಥವಾ ಅಂತ್ಯದ ವೇಳೆಗೆ ಈ ಪ್ರಕಾರದ ಮಧುಮೇಹವು ಕಾಣಿಸಿಕೊಳ್ಳುತ್ತದೆ.

GDM Kannada – ಗರ್ಭಧಾರಣೆಯ ಮಧುಮೇಹವು ಎಷ್ಟು ಸಾಮಾನ್ಯ?

  • ಗರ್ಭಧಾರಣೆಯ ಮಧುಮೇಹ ತುಂಬಾ ಸಾಮಾನ್ಯ.
  • ಗರ್ಭಿಣಿಯಾಗಿರುವಾಗ 100 ಮಹಿಳೆಯರಲ್ಲಿ 18 ಮಹಿಳೆಯರಲ್ಲಿ ಇದು ಕಾಣಿಸಿಕೊಳ್ಳಬಹುದು.

GDM Kannada – ತೂಕ ಹೆಚ್ಚಳ

  • ತೂಕದ ಜೊತೆಜೊತೆಗೆ ಚೆನ್ನಾಗಿ ನಿಯಂತ್ರಿಸಿದ ರಕ್ತದ ಸಕ್ಕರೆ, ಗರ್ಭಿಣಿಯಾಗಿರುವಾಗ ನಿಮ್ಮ ತೂಕ ಮತ್ತು ತೂಕದಲ್ಲಿ ಉಂಟಾಗುವ ಹೆಚ್ಚಳವು ನಿಮ್ಮ ಭ್ರೂಣದ ತೂಕ ಹೆಚ್ಚಳದ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿರುತ್ತದೆ.
  • ನಿಮ್ಮ BMI ಹೆಚ್ಚಾದಂತೆ ಮತ್ತು ಗರ್ಭಿಣಿಯಾಗಿರುವಾಗ ನೀವು ತೂಕ ಹೆಚ್ಚಿಸಿಕೊಂಡಂತೆ, ನಿಮ್ಮ ಭ್ರೂಣದ ತೂಕವೂ ಹೆಚ್ಚಾಗುತ್ತದೆ. ಆದ್ದರಿಂದ, ಹುಟ್ಟುವ ಮುನ್ನವೇ ಭ್ರೂಣವು ಅತಿಯಾದ ತೂಕವನ್ನು ಹೊಂದುವ ಅಪಾಯವಿರುತ್ತದೆ.
  • ಗರ್ಭಧಾರಣೆಯ ಮೊದಲಾರ್ಧದಲ್ಲಿ ಸಣ್ಣ ಮಟ್ಟಿನ ತೂಕ ಏರಿಕೆಯನ್ನು ನೋಡಿಕೊಳ್ಳುವುದು ಉತ್ತಮ ಆಲೋಚನೆ, ಈ ಮೂಲಕ ಗರ್ಭಧಾರಣೆಯ ದ್ವಿತೀಯಾರ್ಧದಲ್ಲಿ ತೂಕದ ಹೆಚ್ಚಳವು ಸಮತೋಲನವಾಗಿರುತ್ತದೆ.